" ನನಗೆ ಹೀಗೆ ಅನಿಸುತ್ತದೆ" ಐ ಥಿಂಕ್ ಸೋ ಅಂತ ಎಲ್ರೂ ಬಳಸುತ್ತಾರೆ.. ಅವರಿಗೆ ವಿಷಯದ ಬಗೆಗಿರುವ ಅಜ್ಞಾನದ ಶಾಬ್ದಿಕರೂಪ ಈ ವಾಕ್ಯ ಎಂದು ಅದೆಷ್ಟೋ ಸಲ ಯೋಚಿಸಿದ್ದಿದೆ. ಆದರೆ ಅದು ಹಾಗೆಂದೇ ದೃಢವಾಗಿ ಹೇಳಲು ಸಾಧ್ಯವಿಲ್ಲ.. ಮೃದು ಮಾತಿನ ವ್ಯಕ್ತಿಯೊಬ್ಬ ತನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಮನಸ್ಸಾಗದೇ ಬಳಸುವ ವಾಕ್ಯ ಎಂದೂ ಅಂದುಕೊಳ್ಳಬಹುದು.
ಅನಿಸಿಕೆ ವ್ಯಕ್ತಪಡಿಸುವ ಕಾಲಕ್ಕೆ ಅದು ಸತ್ಯ , ಅರ್ಧಸತ್ಯ , ಅಥವಾ ಅಸತ್ಯ ಆಗಿರಲೂ ಬಹುದು. " ಕಾಲಾನುಕಾಲಕ್ಕೆ ತಾ ಬಡವಂ ಬಲ್ಲಿದನಾಗನೇ? " ಎಂಬಂತೆ ಅದೇ ಸತ್ಯವಾದೀತು.
ಅನೇಕರಿಗೆ ಅನಿಸಿದ್ದು- " ಕಾಳಿದಾಸನ ಕಾಲಕ್ಕೆ 'ಪುರಾಣಮಿತ್ಯೇವ ನ ಸಾಧು ಸರ್ವಂ ' ಸರಿ ಒಪ್ಕೋತಿವಿ. ಆದ್ರೆ ಈಗಿನ ನವ್ಯತೆಯ ಪರಿಯನ್ನು ನೋಡಿ " ಓಲ್ಡ್ ಈಸ್ ಗೋಲ್ಡ್ " ಅನ್ನೋದೇ ಸರಿ.
ಅಂದ್ರೆ ಎಲ್ರೂ ಅವರವರ ಅನಿಸಿಕೆ ಹೇಳ್ತಾರೆ , ಅವೇ ಮುಂದೆ " ಸಾರ್ವಕಾಲಿಕ ಸತ್ಯ" ಅಂತ ಅನ್ನಿಸಿಕೊಳ್ಳುತ್ತವೆ.
ಹಾಗಾಗಿ ಯಾರೂ ಅಭಿಪ್ರಾಯವನ್ನು ಮುಚ್ಚಿಡಬಾರದು.
ಯಾರಿಗೆ ಗೊತ್ತು ಯಾರ ಯಾವ ಮಾತು ಮುಂದೊಂದು ದಿನ ಜಗತ್ತು ಕೊಂಡಾಡುವ ಮಾತಾಗುತ್ತದೆ ಅಂತ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ